ಡೂ ಮಾರೀಯೆ, ಡ್ಯಾಫ್ನಿ
1907-. ಇಂಗ್ಲಿಷ್ ಕಾದಂಬರಿಕಾರ್ತಿ. ಹುಟ್ಟಿದ್ದು ಲಂಡನಿನಲ್ಲಿ. ಲಂಡನ್ನಿನ ಪ್ರಸಿದ್ಧ ನಟ ಸರ್ ಜಿರಾಲ್ಡ್ ಡೂ ಮಾರೀಯೆನ ಮಗಳು. ಲಂಡನ್, ಪ್ಯಾರಿಸ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿದರೂ ಈಕೆಗೆ ಪಟ್ಟಣದ ಜೀವನ ರುಚಿಸಲಿಲ್ಲ. 1932ರಲ್ಲಿ ಕರ್ನಲ್ ಎಫ್.ಎ.ಎಂ. ಬ್ರೌನಿಂಗ್ ಎಂಬಾತನನ್ನು ಮದುವೆಯಾದಳು. ಮುಂದೆ ಈತ ರಾಜಕುಮಾರಿ ಎಲಿಜûಬೆತ್‍ಳ ಮನೆಯ ಹಣಕಾಸಿನ ಮೇಲ್ವಿಚಾರಕನಾದ (1947). 

	ದಿ ಲಿವಿಂಗ್ ಸ್ಪಿರಿಟ್ (1931), ಐ ವಿಲ್ ನೆವರ್ ಬಿ ಯಂಗ್ ಅಗೆನ್ (1932), ದಿ ಪ್ರೋಗ್ರೆಸ್ ಆಫ್ ಜೂಲಿಯಸ್ (1933), ಜಮೈಕ ಇನ್ (1936), ರೆಬೆಕ (1938), ಫ್ರೆಂಚ್‍ಮನ್ಸ್ ಕ್ರೀಕ್ (1942), ಹಂಗ್ರಿ ಹಿಲ್ (1943), ದಿ ಕಿಂಗ್ಸ್ ಜನರಲ್ (1946), ಮೈ ಕಸಿನ್ ರೇಚೆಲ್ (1951), ಮೇರಿ ಆ್ಯನ್ (1954) - ಇವು ಈಕೆಯ ಪ್ರಸಿದ್ಧ ಕಾದಂಬರಿಗಳು.

	ಈಕೆಯ ಕಾದಂಬರಿಗಳಲ್ಲಿ ಹೆಚ್ಚಿನ ನಾಟಕೀಯತೆ ಇದೆ.

	ದಿ ಆ್ಯಪಲ್ ಟ್ರೀ (1952) - ಇದು ಈಕೆಯ ಕಥಾಸಂಕಲನ. ಜೆರಲ್ಡ್ ಎಂಬುದು ಈಕೆಯ ತಂದೆಯ ವ್ಯಕ್ತಿಚಿತ್ರ.

	ತನ್ನ ಮನೆತನದ ಮೂರು ತಲೆಮಾರುಗಳ ಕಥೆಯನ್ನು ಈಕೆ ಪ್ರಕಟಿಸಿದ್ದಾಳೆ. 1951ರಲ್ಲಿ ಈಕೆ ತನ್ನ ತಾತನ ಪತ್ರಗಳನ್ನು ಪ್ರಕಟಿಸಿದಳು. 1962ರಲ್ಲಿ ಈಕೆ ಕ್ವಿಲರ್ ಕೂಚನ ಅಪೂರ್ಣಗೊಂಡ ಕಾದಂಬರಿ ಕ್ಯಾಸಲ್‍ಡಾರ ಎಂಬ ಕೃತಿಯನ್ನು ಪೂರ್ಣಗೊಳಿಸಿದಳು.
(ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ